Last Updated:
Sanju Weds Geeta: ಸಂಜು ವೆಡ್ಸ್ ಗೀತಾ 2 ಸಿನಿಮಾ ಪ್ರಚಾರಕ್ಕೆ ನಟಿ ರಚಿತಾ ರಾಮ್ ಬಂದಿರಲಿಲ್ಲ. ನಟಿಯ ನಡೆಯ ವಿರುದ್ಧ ಈಗ ಚಿತ್ರತಂಡ ತಿರುಗಿ ಬಿದ್ದಿದೆ. ಸಂಜು ವೆಡ್ಸ್ ಗೀತಾ ಸಿನಿಮಾ ನಿರ್ದೇಶಕ (Director) ನಾಗಶೇಖರ್ ಏನು ಹೇಳಿದ್ರು ಗೊತ್ತಾ?
ನಟಿ ರಚಿತಾ ರಾಮ್ (Rachita Ram) ವಿರುದ್ಧ ನಿರ್ದೇಶಕ ನಾಗಶೇಖರ್ (Nagashekhar) ದೂರು ದಾಖಲಿಸಿದ್ದಾರೆ. ಸಂಜು ವೆಡ್ಸ್ ಗೀತಾ 2 ಸಿನಿಮಾ ಪ್ರಚಾರಕ್ಕೆ ನಟಿ ರಚಿತಾ ರಾಮ್ ಬಂದಿರಲಿಲ್ಲ. ನಟಿಯ ನಡೆಯ ವಿರುದ್ಧ ಈಗ ಚಿತ್ರತಂಡ ತಿರುಗಿ ಬಿದ್ದಿದೆ. ಸಂಜು ವೆಡ್ಸ್ ಗೀತಾ ಸಿನಿಮಾ ನಿರ್ದೇಶಕ (Director) ನಾಗಶೇಖರ್ ಏನು ಹೇಳಿದ್ರು ಗೊತ್ತಾ?
ನಾವು ಇಂತಹ ಕಲಾವಿದರಿಗೆ ಕಠಿಣ ಕ್ರಮ ತೆಗೆದುಕೊಳ್ಬೇಕು. ನಮ್ಮ ಸಿನಿಮಾ ಪ್ರಚಾರಕ್ಕೆ ಒಂಚೂರು ಸಪೋರ್ಟ್ ಕೊಟ್ಟಿಲ್ಲ. ರಾಕ್ಲೈನ್ ವೆಂಕಟೇಶ್ ಮನವೊಲಿಸಲು ಪ್ರಯತ್ನಿಸಿದ್ರು. ರಚಿತಾ ಒಪ್ಪಿಲ್ಲ.ರಮ್ಯಾ, ತಮನ್ನಾ ಎಲ್ಲರಿಗೂ ಸಿನಿಮಾ ಮಾಡಿದ್ದೀನಿ.. ಆದ್ರೆ ಇಂತಹ ಸಮಸ್ಯೆ ಯಾವ ನಟಿಯೂ ಕೊಟ್ಟಿಲ್ಲ ಎಂದರು.
ಒಂದು ದಿನವೂ ಸಪೋರ್ಟ್ ಕೊಟ್ಟಿಲ್ಲ
ಸಿನಿಮಾಗೆ ಇಷ್ಟು ದಿನ ಪ್ರದರ್ಶನ ಕಂಡರು ಒಂದು ದಿನವೂ ಸಪೋರ್ಟ್ ಕೊಟ್ಟಿಲ್ಲ. ಶಿವಣ್ಣ, ಉಪೇಂದ್ರ, ಸುದೀಪ್ ಅಂಥವ್ರೇ ಈ ಸಿನಿಮಾಗೆ ಸಪೋರ್ಟ್ ಕೊಟ್ಟಿದ್ದಾರೆ.ನಾವು ಪೇಮೆಂಟ್ ಕಮ್ಮಿ ಕೊಟ್ಟಿಲ್ಲ ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು ನೀಡಿದ್ದಾರೆ ಎನ್ನಲಾಗಿದೆ. ಇಂಥಹ ನಟಿಯ ವಿರುದ್ಧ ಕ್ರಮ ಕೈಗೊಳ್ಳುವಂತೆ ಮನವಿ ಕೂಡ ಮಾಡಿದ್ದಾರೆ.

ವರದಿ: ಸತೀಶ್ ಕನಕಪುರ ನ್ಯೂಸ್ 18 ಕನ್ನಡ ಪ್ರತಿನಿಧಿ ಬೆಂಗಳೂರು
ಜನವರಿ-10 ರಂದು ಈ ಚಿತ್ರ ರಿಲೀಸ್
ಜನವರಿ-10 ರಂದು ಈ ಚಿತ್ರ ರಿಲೀಸ್ ಆಗಿತ್ತು. ಹೈದ್ರಾಬಾದ್‌ನ ವ್ಯಕ್ತಿ ನಮ್ಮ ಚಿತ್ರದ ವೇಳೆ ಸ್ಟೇ ತಂದಿದ್ದರು. ಹಾಗಾಗಿಯೇ ಲ್ಯಾಬ್ ಅಲ್ಲಿಯೇ ಚಿತ್ರದ 21 ನಿಮಿಷದ ಫೂಟೇಜ್ ಉಳಿದು ಬಿಡ್ತು.ಮೂರು ದಿನ ಮಾತ್ರ ಈ ಚಿತ್ರ ಪ್ರದರ್ಶನ ಆಯಿತು. ಜೂನ್- 6 ರಂದು ಮತ್ತೆ ರಿ ರಿಲೀಸ್ ಆಯ್ತು.
. ಡೈರೆಕ್ಟರ್ ನಾಗಶೇಖರ್ ಈ ಚಿತ್ರವನ್ನ ನಿರ್ದೇಶನ ಮಾಡಿದ್ದಾರೆ. ಶ್ರೀಧರ್ ಸಂಭ್ರಮ ಈ ಚಿತ್ರಕ್ಕೆ ಸಂಗೀತ ಕೊಟ್ಟಿದ್ದಾರೆ. ಸಂಜು ಪಾತ್ರದಲ್ಲಿ ಶ್ರೀನಗರ ಕಿಟ್ಟಿ ಅಭಿನಯಿಸಿದ್ದಾರೆ. ಗೀತಾ ಪಾತ್ರದಲ್ಲಿ ರಚಿತಾ ರಾಮ್ ಅಭಿನಯಿಸಿದ್ದಾರೆ. ಇವರ ಈ ಚಿತ್ರದ ಹಾಡುಗಳು ಗಮನ ಸೆಳೆದಿವೆ.
ಚೇತನ್ ಚಂದ್ರ ಅತಿಥಿ ಪಾತ್ರ ಮಾಡಿದ್ದು, ರಂಗಾಯಣ ರಘು, ಸಾಧು ಕೋಕಿಲ, ತಬಲಾನಾಣಿ, ಗಿಚ್ಚಿಗಿಲಿಗಿಲಿ ವಿನೋದ್, ಸಂಪತ್ ಕುಮಾರ್ ಸೇರಿ ಹಲವರು ಚಿತ್ರದಲ್ಲಿ ಅಭಿನಯಿಸಿದ್ದಾರೆ. ಈ ಸಿನಿಮಾವನ್ನು ಪವಿತ್ರ ಇಂಟರ್ನ್ಯಾಷನಲ್ ಮೂವೀ ಮೇಕರ್ಸ್ ಅಡಿ ಛಲವಾದಿ ಕುಮಾರ್ ನಿರ್ಮಾಣ ಮಾಡಿದ್ದಾರೆ.
ಸಂಜು ವೆಡ್ಸ್ ಗೀತಾ-2 ಸಿನಿಮಾದ ಅಷ್ಟೂ ಆ್ಯಕ್ಷನ್ ಸೀನ್‌ಗಳನ್ನ ರವಿ ವರ್ಮ ಮಾಸ್ಟರ್ ಮಾಡಿದ್ದಾರೆ. ಹಾಡುಗಳು ಅಂತ ಬಂದ್ರೆ, ಶ್ರೀಧರ್ ವಿ.ಸಂಭ್ರಮ ಮಾಡಿದ್ದಾರೆ. ಈ ಮೂಲಕ ಕನ್ನಡಕ್ಕೆ ಒಂದ್ ಒಳ್ಳೆ ಚಿತ್ರ ಕೊಡ್ತಿರುವ ಖುಷಿಯಲ್ಲಿಯೇ ಡೈರೆಕ್ಟರ್ ನಾಗಶೇಖರ್ ಇದ್ದಾರೆ.
June 17, 2025 5:31 PM IST